ಬಾಸ್ಕೋವಿಚ್, ರುಗ್ಗೀರೋಗ್ಯುಸ್ಸೆಪ್ಪೀ		
1711-87. ಯೂಗೊಸ್ಲೋವಿಯಾ ದೇಶದ ಖಗೋಳ ಮತ್ತು ಗಣಿತ ವಿಜ್ಞಾನಿ. ದಾಲ್ಮೇಷಿಯಾದ ದುಬ್ರೋವಿಕ್ ರಾಘುಸಾದಲ್ಲಿ ಜನನ.  ಪ್ರಕಾಶ ವಿಜ್ಞಾನ, ಖಗೋಳ ವಿಜ್ಞಾನ, ಗುರುತ್ವಾಕರ್ಷಣ, ವಾತಾವರಣ ವಿಜ್ಞಾನ, ತ್ರಿಕೋನಮಿತಿ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಿ ಸುಮಾರು 70 ಪ್ರೌಢ ಲೇಖನ ಪ್ರಕಟಿಸಿದ. ಭೂಮಾಪನ ವಿಜ್ಞಾನದಲ್ಲಿ ಅಗ್ರಗಣಿ. ಭೂಮಿಯ ಆಕಾರ ಪರಿಭ್ರಮಣೀಯ ಶಂಕುಜಕಲ್ಪ ಅಲ್ಲ ಎಂಬುದು ಪೂರ್ವಸಿದ್ಧಾಂತ. ಇದನ್ನು ಪ್ರಾಯೋಗಿಕವಾಗಿ ಸ್ಥಿರಪಡಿಸಲು ಸಿ. ಮೇಲ್ ಎಂಬಾತನ ಜೊತೆಗೂಡಿ ರೋಮ್ ಮತ್ತು ರಿಮಿನಿ ನಡುವಿನ ಯಾಮ್ಯೋತ್ತರದ ಕಂಸವನ್ನು ನಿಖರವಾಗಿ ಅಳೆದ.  	  (ಡಿ.ವಿ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ